
ಕುಕ್ಕೆ ಸುಬ್ರಮಣ್ಯ ಮಾ.17: ಕುಕ್ಕೆ ಸುಬ್ರಹ್ಮಣ್ಯದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನವರು ಕುಮಾರಧಾರ ದ್ವಾರದಿಂದ ಕಾಶಿ ಕಟ್ಟೆ ವರೆಗಿನ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಹಾಗೂ ಕಾಶಿ ಕಟ್ಟೆ ಸುತ್ತಮುತ್ತಲಿನ ಪರಿಸರದಲ್ಲಿ ಇದ್ದಂತಹ ಕಸ ಕಡ್ಡಿಗಳು ಪ್ಲಾಸ್ಟಿಕ್ ಬಾಟ್ಲಿಗಳು, ಪ್ಲಾಸ್ಟಿಕ್ ಚೀಲ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನ ಹೆಕ್ಕಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡಿರುವರು. ಹೆಚ್ಚಾಗಿ ದೂರ ದೂರಗಳಿಂದ ಬಂದ ಭಕ್ತಾದಿಗಳೇ ಕಚ್ಚಾ ವಸ್ತುಗಳನ್ನ ಎಸೆದಿರುವುದು ಗಮನಕ್ಕೆ ಬಂದಿರುತ್ತದೆ.

ಪ್ರತಿ ವಾರದ ಆದಿತ್ಯವಾರ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನವರು ಡಾಕ್ಟರ್ ರವಿಕಕ್ಕೆ ಪದವು ಅವರ ಮಾರ್ಗದರ್ಶನದಲ್ಲಿ ಕುಕ್ಕೆ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುವರು. ಸುಮಾರು 50ಕ್ಕೂ ಮಿಕ್ಕಿ ಸ್ವಯಂಸೇವಕರು ದೇವರ ಸೇವೆ ಎಂದೇ ಭಾವಿಸಿ ನಿರಂತರವಾಗಿ ಪ್ರತಿ ವಾರದ ಆದಿತ್ಯವಾರದಂದು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತಾರೆ.