
ಬೆಳ್ತಂಗಡಿ :ಕರ್ನಾಟಕ ರಾಜ್ಯ ವೇಸ್ಟ್ ಲಿಪ್ಟರ್ ಸಂಸ್ಥೆ ( ರೀ) ಬೆಂಗಳೂರು, ಜಿಲ್ಲಾ ವೆಯಿಟ್ ಲಿಪ್ಟರ್ ಸಂಸ್ಥೆ( ರೀ)
ಮೈಸೂರು ,ಫಿಸಿಕಲ್ ಎಜುಕೇಶನ್ ಟೀಚರ್ಸ್ ಅಕಾಡೆಮಿ ಟ್ರಸ್ಟ್(ರೀ) ಮೈಸೂರು ಮತ್ತು ಎಸ್. ಬಿ .ಆರ್. ಆರ್ .ಮಹಾಜನ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ )ಶಿಕ್ಷಣ ವಿಭಾಗ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರುಗಿದ 5ನೇ ಜೂನಿಯರ್, ಸಬ್ ಜೂನಿಯರ್ (ಬಾಲಕ ಮತ್ತು ಬಾಲಕಿಯರು) 51ನೇ ಪುರುಷರ 35ನೇ ಮಹಿಳೆಯರ ಕರ್ನಾಟಕ ರಾಜ್ಯ ವೆಯಿಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ 2024-25 ನೇ ಸಾಲಿನಲ್ಲಿ ಆಳ್ವಾಸ್ ಕಾಲೇಜು ಮೂಡಬಿದ್ರೆ ತಂಡವು 18 ಚಿನ್ನ 19 ಬೆಳ್ಳಿ 16 ಕಂಚು ಹಾಗೂ ಒಟ್ಟು 53 ಪದಕಗಳೊಂದಿಗೆ ಆರು ವಿಭಾಗದಲ್ಲೂ ತಂಡ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪುರುಷರ ವಿಭಾಗದಲ್ಲಿ: ಸಬ್ ಜೂನಿಯರ್ ನಲ್ಲಿ 2 ಚಿನ್ನ ,1 ಬೆಳ್ಳಿ, 3ಕಂಚು, ಜೂನಿಯರ್ ವಿಭಾಗದಲ್ಲಿ: 3 ಚಿನ್ನ, 4ಬೆಳ್ಳಿ, 2ಕಂಚು, ಸೀನಿಯರ್ ವಿಭಾಗದಲ್ಲಿ: 4 ಚಿನ್ನ ,5 ಬೆಳ್ಳಿ ,1 ಕಂಚಿನ ಪದಕ ಪಡೆದುಕೊಂಡಿದೆ


.
ಮಹಿಳೆಯರ ವಿಭಾಗದಲ್ಲಿ :ಸಬ್ ಜೂನಿಯರ್ ನಲ್ಲಿ 2 ಚಿನ್ನ, 5 ಬೆಳ್ಳಿ, 2 ಕಂಚು, ಜೂನಿಯರ್ ವಿಭಾಗದಲ್ಲಿ: 4 ಚಿನ್ನ ,4ಬೆಳ್ಳಿ, 2ಕಂಚು, ಸೀನಿಯರ್ ವಿಭಾಗದಲ್ಲಿ: 4 ಚಿನ್ನ, 5 ಬೆಳ್ಳಿ ,1 ಕಂಚಿನ ಪದಕ ಪಡೆದುಕೊಂಡಿದೆ. ಪುರುಷರ ಸಬ್ ಜೂನಿಯರ್ ವಿಭಾಗದಲ್ಲಿ: ಆಳ್ವಾಸ್ ಕಾಲೇಜು 149 ಅಂಕದೊಂದಿಗೆ ಪ್ರಥಮ, ಜೈನ್ ಜೂನಿಯರ್ ಕಾಲೇಜ್ ಮೂಡುಬಿದರೆ 122 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆದಿದೆ.
ಪುರುಷರ ಜೂನಿಯರ್ ವಿಭಾಗದಲ್ಲಿ: ಆಳ್ವಾಸ್ ಕಾಲೇಜ್ 174 ಅಂಕದೊಂದಿಗೆ ಪ್ರಥಮ ,ಎಸ್ ಡಿ ಎಮ್ ಕಾಲೇಜ್ ಉಜಿರೆ 148 ಅಂಕದೊಂದಿಗೆ ದ್ವಿತೀಯ ತಂಡಪ್ರಶಸ್ತಿ ಪಡೆಯಿತು. ಪುರುಷರ ಸೀನಿಯರ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು 260 ಅಂಕದೊಂದಿಗೆ ಪ್ರಥಮ ಕಾಲೇಜು 205ಅಂಕದಂತೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು. ಮಹಿಳೆಯರ ಸಬ್ ಜೂನಿಯರ್ ವಿಭಾಗದಲ್ಲಿ :ಆಳ್ವಾಸ್ ಕಾಲೇಜು ಒಟ್ಟು 247 ಅಂಕದೊಂದಿಗೆ ಪ್ರಥಮ ಡಿ ವೈ ಐ ಎಸ್ ಬೆಳಗಾವಿ 184 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು. ಮಹಿಳೆಯರ ಜೂನಿಯರ್ ವಿಭಾಗದಲ್ಲಿ :ಆಳ್ವಾಸ್ ಕಾಲೇಜು 246 ಅಂಕದೊಂದಿಗೆ ಪ್ರಥಮ ಎಸ್ ಡಿ ಎಮ್ ಕಾಲೇಜ್ ಉಜಿರೆ 161 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು.
ಮಹಿಳಾ ಸೀನಿಯರ್ ವಿಭಾಗದಲ್ಲಿ: ಆಳ್ವಾಸ್ ಕಾಲೇಜು 232 ಅಂಕದೊಂದಿಗೆ ಪ್ರಥಮ ಕಾಲೇಜು ಉಜ್ಜಿರೆ 130 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು. ಆಳ್ವಾಸ್ ಕಾಲೇಜು ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವ ಅಭಿನಂದನೆ ಸಲ್ಲಿಸಿರುತ್ತಾರೆ.



