

ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ -ಮಾಲಕ ಮತ್ತು ಬಿಎಮ್ಎಸ್ ಆಟೋ ಚಾಲಕ ಮಾಲಕ ಸಂಘದ ಸದಸ್ಯ ,ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಕೋಶ ಅಧಿಕಾರಿ, ರಾ ನ್ಯೂಸ್ ರಿಪೋರ್ಟರ್ ಮಣಿಕಂಠ ಕುಕ್ಕೆ ಸುಬ್ರಹ್ಮಣ್ಯ


ಪ್ರಸಿದ್ಧ ವಾಸ್ತುಶಿಲ್ಪ ಮಹೇಶ್ ಭಟ್ ಮುನಿಯಂಗಳರವರೊಂದಿಗೆ ಕುಂದಾಪುರ ಕೊಲ್ಲೂರು ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬರುವ ದಾರಿಯಲ್ಲಿ ಸುಂಕದಕಟ್ಟೆ ನಡು ರಸ್ತೆ ಲ್ಲಿ ಬಿದ್ದಿರುವ ಐಫೋನ್ ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಐಫೋನ್ ಮೊಬೈಲ್. ಸಿಕ್ಕ ನಂತರ ಮೊಬೈಲ್ ಕರೆ ಬಂದಾಗ ಮಣಿಕಂಠ ರವರು ಮೊಬೈಲ್ ಕರೆಯನ್ನು ಸ್ವೀಕರಿಸಿ ನಿಮ್ದೇನಾ ಮೊಬೈಲ್ ಎಂದು ಕೇಳಿದಾಗ ಹೌದು ನಾವು ಕಳೆದುಕೊಂಡಿದ್ದೇವೆ ಎಂದು ತಿಳಿಸಿದರು.





ಮೊಬೈಲ್ ವಾರಸುದಾರರಾದ ಕಾರ್ಕಳ ಹಳದಂಗಡಿ ಗಣೇಶ್ ಪೂಜಾರಿ ರವರಿಗೆ ತಕ್ಷಣ ಸುಬ್ರಹ್ಮಣ್ಯ ಕೈಕಂಬದಲ್ಲಿ ಬರಲು ತಿಳಿಸಿದಾಗ ಗಣೇಶ್ ಪೂಜಾರಿಯವರು ಕೈಕಂಬಕ್ಕೆ ಬಂದು ಮೊಬೈಲ್ ಸ್ವೀಕರಿಸಿದ್ದಾರೆ ಮಣಿಕಂಠನವರು ಸಿಕ್ಕ ಮೊಬೈಲನ್ನು
ನೀಡಿ ಮಾನವತೆ ಮೆರೆದಿದ್ದಾರೆ.

ಗಣೇಶ್ ಪೂಜಾರಿ ಮಣಿಕಂಠ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ರಾ ನ್ಯೂಸ ಮೂಲಕ ತಿಳಿಸಿದ್ದಾರೆ.

