
ಕುಕ್ಕೆ ಸುಬ್ರಹ್ಮಣ್ಯ ಮಾ.13 : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾ.3. 2024 ರಂದು ನಡೆದ ಶ್ರೀ ಭರತ್ ಕುಮಾರ್ ಕಾಗಿನಹರೆ ಹಾಗೂ ಶ್ರೀಮತಿ ಯಶ್ಮಿತಾ (ಶ್ರೀಮತಿ ಸ್ನೇಹಲತಾ ಮತ್ತು ಶ್ರೀ ಸುಬ್ರಹ್ಮಣ್ಯ ಅತ್ಯಾಡಿ ಇವರ ಸುಪುತ್ರಿ) ಇವರ ವಿವಾಹ ಸಮಾರಂಭದ ನೆನಪಿಗಾಗಿ, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಗೆ 10,000 ರೂಪಾಯಿಗಳನ್ನು ಅನಾಥಾಶ್ರಮ ನಿರ್ಮಾಣ ಕಾರ್ಯಕ್ಕೆ ದೇಣಿಗೆ ರೂಪದಲ್ಲಿ ನೀಡಿರುತ್ತಾರೆ. ಇವರಿಗೆ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕೃತಜ್ಞತೆಗಳು. ಅವರಿಗೂ ಹಾಗೂ ಅವರ ಕುಟುಂಬಕ್ಕೂ ಶ್ರೀ ಸುಬ್ರಹ್ಮಣ್ಯ ದೇವರು ಆಯುರಾರೋಗ್ಯ ಭಾಗ್ಯ ಸುಖ- ಶಾಂತಿ- ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇವೆ.