
ಹೌದು ಗೆಳೆಯರೇ.., ಕಷ್ಟದಲ್ಲಿ ಇರುವ ಬಡ ಜನರಿಗೆ ಸಹಾಯ ಮಾಡಲೆಂದೇ ಆ ದೇವರು ಸೃಷ್ಟಿಸಿದ ಅವತಾರ ಪುರುಷ ಈ ನಮ್ಮ ರವಿಯಣ್ಣ ಎಂದರೆ ತಪ್ಪಾಗಲಾರದು.
ನಾನು ಯಾಕೆ ಈ ಮಾತು ಹೇಳಿದೆನೆಂದರೆ., ಇಂದಿನ ಸ್ವಾರ್ಥ ಯುಗದಲ್ಲಿ ಒಬ್ಬರಿಗೊಬ್ಬರು ಸಣ್ಣ ಸಹಾಯ ಮಾಡುವುದೂ ಕೂಡ ಬೆರಳೆಣಿಕೆಯಷ್ಟು. ಆದರೆ ನಮ್ಮ ರವಿಯಣ್ಣ ಸದ್ದಿಲ್ಲದೇ.., ಬಡವರಿಗೆ ದೊಡ್ಡ ದೊಡ್ಡ ಸಹಾಯ ಮಾಡುತ್ತಾ ಬಂದಿದ್ದಾರೆ.


ಈ ಹಿಂದೆ ಎಷ್ಟೋ ಸಮಾಜ ಸೇವೆ ಮಾಡಿದ್ದಾರೆ. ಆವಾಗ ಅವರ ಬಗ್ಗೆ ಬರೆಯದ ನಾನು ಇಂದೇಕೆ ಅವರ ಬಗ್ಗೆ ಬರೆದೇ ಎಂದು ನೀವು ಆಲೋಚಿಸಬಹುದು. ಅದಕ್ಕೂ ಒಂದು ಕಾರಣ ಇದೆ..
ನಮ್ಮ ಕುಕ್ಕೆ ಶ್ರೀ ಆಟೋ ಚಾಲಕ-ಮಾಲಕ ಸಂಘದ ಮಾಜಿ ಅಧ್ಯಕ್ಷರಾದ ಪುಟ್ಟಣ್ಣ ಕೆ.ಜಿ. ಅವರು ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿದ್ದು ತಮಗೆಲ್ಲರಿಗೂ ತಿಳಿದಿದೆ. ನಮ್ಮ ಸಂಘದ ವತಿಯಿಂದ ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುವ ಸಲುವಾಗಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ., ರವಿಯಣ್ಣ ಅವರು ಒಂದು ಮಾತು ಹೇಳಿದರು., ಬಡ ಕುಟುಂಬ ಇಬ್ಬರು ಸಣ್ಣ ಪ್ರಾಯದ ಮಕ್ಕಳು ಮೃತರಿಗೆ ಇದ್ದಾರೆ.ಅದರಲ್ಲೂ ಒಂದು ಹೆಣ್ಣು ಮಗು. ಆ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ನಾವೆಲ್ಲ ಸಂಘ-ಸಂಸ್ಥೆಗಳಲ್ಲಿ ಆರ್ಥಿಕ ನೆರವು ಸಂಗ್ರಹಿಸಿ ಆ ಮಗುವಿನ ಹೆಸರಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುವ ಎಂದು.


ಸಭೆಯಲ್ಲಿ ಹಾಜರಿದ್ದ ಲಯನ್ಸ್ ಅಧ್ಯಕ್ಷರಾದ ರಾಜೇಶ್ ಯನ್.ಯಸ್. ಅವರು ಆ ಕೂಡಲೇ.,
ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು. ಹಾಗು ಕ್ಲಪ್ತ ಸಮಯದಲ್ಲಿ ಸಂತ್ರಸ್ತರಿಗೆ ಸಹಾಯಧನ ಹಸ್ತಾಂತರಿಸಿದರು.
ಅದೇ ರೀತಿ ನಮ್ಮ ಸಂಘದ ವತಿಯಿಂದ ಹಾಗು ಗೌರವಾಧ್ಯಕ್ಷರ ಮತ್ತು ಸದಸ್ಯರ ಸಹಾಯ ಹಸ್ತದಿಂದ ನಮ್ಮ ಕೈಲಾದ ಆರ್ಥಿಕ ಸಹಾಯವನ್ನು ಸಂಗ್ರಹಿಸಿ. ಮೃತರ ಮಗಳ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುವುದಾಗಿ ಮಾಸಿಕ ಸಭೆಯಲ್ಲಿ ತೀರ್ಮಾನಿಸಿದ್ದೆವು.
ಮಕ್ಕಳ ವಿದ್ಯಾಭ್ಯಾಸದ ಭವಿಷ್ಯಕ್ಕೆ ಆರ್ಥಿಕ ಸದೃಢ ಆಯಿತು. ಎಂದು ಮನಗಂಡ ರವಿಯಣ್ಣ. ಬೇರೆ ಏನಾದರು ಸಹಾಯದ ಅವಶ್ಯಕತೆ ಇದೆಯೇ..? ಎಂದು ಕುಟುಂಬ ಸದಸ್ಯರನ್ನು ಸಂಪರ್ಕಿಸಿದರು. ಆಗ ತಿಳಿದದ್ದು ಪುಟ್ಟಣ್ಣ ಅವರು ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದರು., ಆಟೋ ಚಾಲನೆ ಮಾಡಿ ಉಳಿದ ಸಮಯದಲ್ಲಿ ಸ್ವತಃ ತಾನೇ (ಗಾರೆ ಕೆಲಸಕ್ಕೆ ಸಿಬ್ಬಂದಿ ಇಲ್ಲದೆ.) ಕಷ್ಟ ಪಟ್ಟು ಮನೆಯನ್ನು ಕಟ್ಟುತ್ತಿದ್ದರು. ಪೌಂಡೇಶನ್ ಆಗಿ ಗೋಡೆ ಕಟ್ಟಿ ಮುಗಿಯುವಾಗ ಅನಾರೋಗ್ಯಕ್ಕೆ ತುತ್ತಾದರು. ಹಾಗಾಗಿ ಆ ಮನೆ ಅಲ್ಲಿಯೇ ನಿಂತಿತು.
ಇದು ಪುಟ್ಟಣ್ಣ ಅವರ ಜೀವನದ ಆಸೆ. ಎಂಬ ವಿಚಾರ ತಿಳಿದ ರವಿಯಣ್ಣ ತಡ ಮಾಡದೆ ಆ ಕ್ಷಣದಲ್ಲೇ ಒಂದು ಮಾತು ಅವರ ಕುಟುಂಬ ವರ್ಗಕ್ಕೆ ನೀಡುತ್ತಾರೆ. ಗೋಡೆ ವರೆಗೆ ಆದ ಮನೆಯನ್ನು ಲಿಂಟಲ್ ಹಾಕಿ ಸ್ಲಾಬ್ ಮಾಡಿ ಸಾರಣೆ ಮಾಡಿ ಟೈಲ್ಸ್ ಹಾಕಿ ಸುಣ್ಣ ಬಣ್ಣ ಬಳಿದು ವಾಸಕ್ಕೆ ಯೋಗ್ಯವಾದ ಮನೆಯಾಗಿ ಮಾಡಿಕೊಡುವ ಜವಾಬ್ದಾರಿ ನನ್ನದು. ಎಂದು.


ಅವರು ಕೊಟ್ಟ ಮಾತಿನಂತೆ ನಿನ್ನೆಯ ದಿನ ಲಿಂಟಲ್(ಬೆಲ್ಟ್ ಸಮೇತ)ಹಾಕಿ. ಸ್ಲಾಬ್ ಮಾಡಿದ್ದಾರೆ. ಎಂಬ ಮಾಹಿತಿ ನಮಗೆ ಕುಟುಂಬ ವರ್ಗದಿಂದ ಸಿಕ್ಕಿದೆ. ಕ್ಲಪ್ತ ಸಮಯದಲ್ಲಿ ವಾಸಕ್ಕೆ ಯೋಗ್ಯವಾದ ರೀತಿಯಲ್ಲಿ ಮನೆಯನ್ನು ಕಟ್ಟಿಕೊಡುವುದಾಗಿ ಈಗಾಗಲೇ ಮಾತು ನೀಡಿದ್ದಾರೆ. ಅದೆಷ್ಟು ಬೇಗ ಆ ಮನೆ ಪೂರ್ಣಗೊಳ್ಳಲಿ. ಹಾಗು ಇದೇ ರೀತಿ ಕಷ್ಟದಲ್ಲಿ ಇರುವ ಇನ್ನಷ್ಟು ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಶಕ್ತಿಯನ್ನು ಕ್ಷೇತ್ರಾಧಿಪತಿ ಸುಬ್ರಹ್ಮಣ್ಯ ದೇವರು ನಿಮಗೆ ನೀಡಲಿ ಎಂಬ ಪ್ರಾರ್ಥನೆ.🙏🏻
✍🏻ರವಿ ಕಕ್ಕೆ ಪದವು ಅಭಿಮಾನಿ. ಹಾಗು ಸದಸ್ಯರು ಕುಕ್ಕೆ ಶ್ರೀ ಆಟೋ ಚಾಲಕ-ಮಾಲಕ ಸಂಘ(ರಿ) ಸುಬ್ರಹ್ಮಣ್ಯ.