
ಕುಕ್ಕೆ ಸುಬ್ರಮಣ್ಯ ಮಾ.11: ಸುಬ್ರಹ್ಮಣ್ಯ ಭೂ ಸೇನೆಯ ಲೆಫ್ಟಿನೆಂಟ್ ಆಗಿ ಸುಬ್ರಹ್ಮಣ್ಯ ಗ್ರಾಮದ ನೂಚಿಲ ನಿವಾಸಿ ಅಜಿತೇಶ್.ಪಿ.ಎಸ್. ಪೆರ್ಮುಖ ಅವರು ನಿಯುಕ್ತಿಗೊಂಡಿದ್ದಾರೆ.
ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪಿ.ಯು.ಸಿ ಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಪೊನ್ನಂಪೇಟೆ ಕಾಲೇಜಿನಲ್ಲಿ ಪಡೆದ ಬಳಿಕ ಡೆಹಾಡೂನ್ ನ ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ದ್ವಿತೀಯ ಎಂಎಸ್ಸಿ ಪದವಿ ಕಲಿತಿದ್ದರು. ಕಳೆದ ವರ್ಷ ನಡೆದ ಭೂಸೇನೆ ನೇಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಚೆನ್ನೈ ನ ಇಂಡಿಯನ್ ಆರ್ಮಿ ಆಫೀಸರ್ಸ್ ರ್ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಆಫೀಸರ್ಸ್ ಟ್ರೈನಿಂಗ್ ಪಡೆದರು. ಅಜಿತೇಶ್ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ವಿದ್ಯಾರತ್ನ ಹಾಗೂ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀ ಕೃಷ್ಣ ಶರ್ಮ.ಪಿ ಅವರ ಪುತ್ರ.