
🛑 ಮೊಸಳೆ ಹಿಡಿದು ಸತ್ತಿರುವ ಶಂಕೆ
🛑 ಗೊತ್ತಿದ್ದರೂ ವಿಲೇವಾರಿ ಮಾಡದ ಸ್ಥಳೀಯಾಡಳಿತ
🛑 ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಯಿಂದ ದಫನ

ಕುಕ್ಕೆ ಸುಬ್ರಹ್ಮಣ್ಯ ಫೆ.28: ಕುಕ್ಕೆ ಸುಬ್ರಮಣ್ಯ ಕುಮಾರಧಾರ ನದಿಯ ನೀರಲ್ಲಿದ್ದ ಕಳೆದ ಮೂರು ದಿನಗಳಿಂದ ಸತ್ತು ತೇಲುತ್ತಿದ್ದ ದನದ ಮೃತ ದೇಹವನ್ನು ರವಿ ಕಕ್ಕೆ ಪದವು ಸಮಾಜ ಸೇವಾ ತಂಡ ದಫನ ಮಾಡಿದ ಘಟನೆ ಫೆ.27ರಂದು ವರದಿಯಾಗಿದೆ. ಸುಬ್ರಹ್ಮಣ್ಯದ ಕುಮಾರಧಾರ ಸ್ಥಾನಗಟ್ಟದ ಬಳಿ ನೀರಿನಲ್ಲಿ ಸತ್ತ ದನ ಮೂರು ದಿನಗಳಿಂದ ಗಮನಿಸಿದ ಸ್ಥಳೀಯರು ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿದರು ಏನೆಂದು ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪ ಕೇಳಿ ಬಂದಿದೆ.
ಸುಬ್ರಹ್ಮಣ್ಯದ ಕುಮಾರಧಾರ ಸ್ಥಾನಗಟ್ಟದ ಬಳಿ ನೀರಿನಲ್ಲಿ ಸತ್ತ ದನ ಮೂರು ದಿನಗಳಿಂದ ಗಮನಿಸಿದ ಸ್ಥಳೀಯರು ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿದರು ಏನೆಂದು ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪ ಕೇಳಿ ಬಂದಿದೆ.ಇದನ್ನು ಗಮನಿಸಿದ ಡಾ.ರವಿ ಕಕ್ಕೆ ಪದವು ಕೂಡಲೇ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸದಸ್ಯರೊಂದಿಗೆ ಸೇರಿಕೊಂಡು ಫೆ.27 ರಂದು ಮೂರು ದಿನಗಳಿಂದ ಸತ್ತು ವಾಸನೆ ಬರುತ್ತಿದ್ದ ದನವನ್ನು ದಡಕ್ಕೆ ತಂದು ನದಿ ಪಕ್ಕದಲ್ಲಿ ಜೆಸಿಬಿ ಬಳಸಿ ಗುಂಡಿ ತೋಡಿ ದಫನ ಮಾಡಿದ್ದಾರೆ. ಅಲ್ಲದೆ ದನ ಕೊಳೆತು ವಾಸನೆ ಬರುತಿದ್ದ ಕಿಂಡಿ ಅಣೆಕಟ್ಟಿನ ಮೇಲ್ಭಾಗದ ನೀರನ್ನು ಬಿಟ್ಟು ಸ್ವಚಗೊಳಿಸಲಾಯಿತು. ಈ ಕಾರ್ಯದಲ್ಲಿ ಡಾ. ರವಿ ಕಕ್ಕೆ ಪದವು, ಕಾರ್ತಿಕ್ ದೆವರಗದ್ದೆ, ಗೋಪಾಲ್ ಎಣ್ಣೆ ಮಜಲು, ಗ್ರಾ. ಪಂ ನ ರಾಮಚಂದ್ರ, ಆನಂದ ಮತ್ತಿತರರು ಸಹಕರಿಸಿದರು.