ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಸ್ಪತ್ರೆ ಮೇಲ್ದರ್ಜೆಗಾಗಿ ಧಾರ್ಮಿಕ ಆಯುಕ್ತರಿಗೆ ಮನವಿ.

ಮನವಿಗೆ ತುರ್ತಾಗಿ ಸ್ಪಂದಿಸುವ ಭರವಸೆ ನೀಡಿದ ಆಯುಕ್ತರು.

ಕುಕ್ಕೆ ಸುಬ್ರಮಣ್ಯ ಮಾ.2: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ 24×7 ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡಬೇಕೆಂದು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಧಾರ್ಮಿಕ ಆಯುಕ್ತ ಬಸವರಾಜೇಂದ್ರ. ಏಚ್ ಅವರಿಗೆ ಮಾ.1 ರಂದು ಮನವಿ ಮಾಡಲಾಯಿತು.
ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಅವರಿಗೆ ಮನವಿ ನೀಡಲಾಗಿದ್ದು ಮನವಿ ಸ್ವೀಕರಿಸಿದ ಅವರು ಶೀಘ್ರವಾಗಿ ತುರ್ತುಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ವರದಿಯಾಗಿದೆ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು, ಪದಾಧಿಕಾರಿಗಳು ಹಾಗೂ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದು ಮಾನವಿ ನೀಡಲಾಯಿತು.

Leave a Comment

Your email address will not be published. Required fields are marked *