
ಸುಬ್ರಹ್ಮಣ್ಯ ಜ14: ಸುಬ್ರಹ್ಮಣ್ಯದ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ರವಿವಾರದಂದು ಕುಮಾರಧಾರ ದಿಂದ ದೇವಿ ದೇವಸ್ಥಾನದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಭಕ್ತಾದಿಗಳು ದೂರದ ಊರಿನಿಂದ ಬೇರೆ ಬೇರೆ ಕ್ಷೇತ್ರಗಳಿಂದ ವಾಹನಗಳಲ್ಲಿ ಆಗಮಿಸುವಂತಹ ಸಂದರ್ಭದಲ್ಲಿ ಮಾರ್ಗದ ಇಕ್ಕಲೆಗಳಲ್ಲಿ ಬಹಳಷ್ಟು ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲಿಗಳು, ನೀರಿನ ಕ್ಯಾನುಗಳು ಹಾಗೂ ಆಹಾರದ ಪಟ್ಟಣಗಳನ್ನು ಎಸೆದು ಪರಿಸರವನ್ನು ಮಾಲಿನ್ಯ ಮಾಡತಕ್ಕದ್ದು ಕಂಡುಬರುತಿದೆ.
ಇದನ್ನು ಮನಗಂಡ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು ಹಾಗೂ ಸಮಾಜ ಸೇವಾ ಟ್ರಸ್ಟ್ ನ ಜವಾಬ್ದಾರಿ ಯನ್ನು ವಹಿಸಿಕೊಂಡಿರುವ ಶರಣಪ್ಪ ರವರ ನೇತೃತ್ವದಲ್ಲಿ ಸ್ವಚ್ಛಗೊಲಿಸಲಾಯಿತು. ಕುಮಾರ ದಾರದಿಂದ ದೇವಿ ದೇವಸ್ಥಾನದ ಪರಿಸರಗಳಲ್ಲಿ ಇರತಕ್ಕಂತಹ ಬಾಟಲಿಗಳು ಹಾಗೂ ಕಚ್ಚಾ ವಸ್ತುಗಳನ್ನು ಸ್ವಚ್ಛತೆ ಮಾಡುವುದರೊಂದಿಗೆ ಸೇವಾ ಕಾರ್ಯವನ್ನು ಕೈಗೊಂಡಿರುವರು.
