
ಸುಬ್ರಹ್ಮಣ್ಯ ಜ 10. ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಧಕ್ಷರು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರು ಅದ ರೊ. ವೆಂಕಟೇಶ್ ಎಚ್ ಎನ್ ಅವರ ಹುಟ್ಟುಹಬ್ಬಕ್ಕೆ ಇಂದು ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಯಿಂದ ಶುಭಾಶಯವನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಡಾ. ರವಿ ಕಕ್ಕೆ ಪದವು ಸಮಾಜ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆ ಪದವು ರವರು ಮಾತನಾಡಿ ವೆಂಕಟೇಶ್ ಎಚ್ಎಲ್ ಅವರು ಓರ್ವ ಪರೋಪಕಾರಿ ಯಾರೇ ಕಷ್ಟದಲ್ಲಿ ಸಿಲುಕಿದವರಿಗೆ ಕೂಡಲೇ ಅಲ್ಲಿಗೆ ಬಂದು ಸಹಾಯ ಹಸ್ತ ನೀಡುವವರು. ಅದಲ್ಲದೆ ಅವರು ಪಂಚಾಯತ್ ಸದಸ್ಯರಾಗಿದ್ದಾಗ ಇದೀಗ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಅವರ ಸೇವೆ ಅಪಾರವಾದದ್ದು. ಅದಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡವರು.
ಐನೆಕ್ಕಿ ಸುಬ್ರಹ್ಮಣ್ಯ ಸೇವಾ ಸಹಕಾರ ಸಂಘದಲ್ಲಿ ಸದಸ್ಯರಾಗಿ ಹಾಗೂ ಉಪಾಧ್ಯಕ್ಷರಾಗಿ ತನ್ನ ಸೇವೆಯನ್ನು ಮುಂದುವರಿಸಿದವರು ಸಮಾಜ ಸೇವೆಯಲ್ಲಿ ಎತ್ತಿದ ಕೈ ಅವರೆ ರೊ. ವೆಂಕಟೇಶ್ ಎಚ್ ಎಲ್ ಅವರು ನನ್ನ ಆತ್ಮೀಯ ಸ್ನೇಹಿತರು ಹೌದು ನನ್ನ ಯಾವುದೇ ಕೆಲಸ ಕಾರ್ಯಗಳಲ್ಲಿ ಸದಾ ಬೆನ್ನೆಲುಬಾಗಿ ನಿಂತವರು ಹೌದು ಪ್ರೋತ್ಸಾಹ ನೀಡಿದವರು ಹೌದು ಎಂದು ಅವರ ಬಗ್ಗೆ ನುಡಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪತ್ರಕರ್ತ ರ ಸಂಘದ ಅಧ್ಯಕ್ಷ ರು ರೊ.ವಿಶ್ವನಾಥ ನಡು ತೋಟ, ಸುಬ್ರಮಣ್ಯ ರೋಟರಿ ಕ್ಲಬ್ಬಿನ ಪೂರ್ವಾಧ್ಯಕ್ಷ ರೊ. ಗೋಪಾಲ ಎಣ್ಣೆ ಮಜಲ್ ಮತ್ತಿತರು ಉಪಸ್ಥಿತರಿದ್ದರು.
