
ಸುಬ್ರಹ್ಮಣ್ಯ(ಅ.08):ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಎಲ್ಲಾ ಕಡೆ ಕಾರ್ಯನಿರ್ವಹಿಸುತ್ತಿರುವ ಸಮಾಜ ಸೇವಾ ಸಂಸ್ಥೆ. ಈ ಸಂಸ್ಥೆಯಲ್ಲಿ ಇರುವಂತ ನಾವೆಲ್ಲರೂ ಗುಂಪಾಗಿ ಜನಸೇವೆಯನ್ನು ಹಾಗೂ ಸಮಾಜಸೇವೆಯನ್ನು ಮಾಡುತ್ತಾ ಸಮಾಜಮುಖಿಯಾಗಿ ಕೆಲಸ ಮಾಡುತಿದ್ದೇವೆ ಎಂದು ರೋಟರಿ ಜಿಲ್ಲೆಯ 3181 ಮೈಸೂರಿನ ಪೂರ್ವ ಅಸಿಸ್ಟೆಂಟ್ ಗವರ್ನರ್ ರೊಟೇರಿಯನ್ ಮಂಜುನಾಥ್ ನುಡಿದರು.
ಅವರು ಭಾನುವಾರ ಡಾ.ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದರು. ಇವರು ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿ ಕುಕ್ಕೆ ಸುಬ್ರಮಣ್ಯಕ್ಕೆ ಬಂದ ಸಂದರ್ಭದಲ್ಲಿ ಶ್ರೀಯುತರನ್ನು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ಡಾ.ರವಿ ಕಕ್ಕೆ ಪದವು ಅವರು ಆತ್ಮೀಯವಾಗಿ ತನ್ನ ಕಚೇರಿಗೆ ಬರಮಾಡಿಕೊಂಡು ಗೌರವಿಸಿದರು. ಅದೇ ದಿನ ಮಂಜುನಾಥ್ ರವರ ಹುಟ್ಟುಹಬ್ಬ ಆದ್ದರಿಂದ ಡಾ.ರವಿ ಕಕ್ಕೆ ಪದವು ಕೇಕ್ ತಂದು ಮಂಜುನಾಥ್ ರವರ ಹುಟ್ಟು ಹಬ್ಬವನ್ನು ಎಲ್ಲರ ಸಮ್ಮುಖದಲ್ಲಿ ಆಚರಿಸಿದರು.

ಇದಕುತ್ತರಿಸಿದ ಮಂಜುನಾಥ್ ಅವರು ನಾನು ಮೈಸೂರಿನಲ್ಲಿ ಇದ್ದರೆ ಎಲ್ಲರೂ ಕೇಕ್ ಕತ್ತರಿಸುವ ಹುಟ್ಟುಹಬ್ಬವನ್ನ ಗೌಜಿಯಾಗಿ ಮಾಡುವ ಅನ್ನುತ್ತಾರೆ. ಅದಕ್ಕೋಸ್ಕರ ಅದ್ಯಾವುದೂ ಬೇಡ ನಾನು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕಾಗಿ ತೆರಳುತ್ತೇನೆ ,ಎಂದು ಇಲ್ಲಿಗೆ ಬಂದೆ. ಅಚಾನಕ್ಕಾಗಿ ರೊಟೇರಿಯನ್ ಡಾ.ರವಿ ಕಕ್ಕೆ ಪದವು ಅವರ ಭೇಟಿಯಾಯಿತು. ಅವರು ನನ್ನನ್ನು ಬಿಡಲಿಲ್ಲ ಎಂದರು.ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಧ್ಯಕ್ಷ ರೊಟೇರಿಯನ್ ವಿಶ್ವನಾಥ ನಾಡು ತೋಟ ನಿರೂಪಣೆಯೊಂದಿಗೆ ಮಂಜುನಾಥ್ ಅವರಿಗೆ ದಿನೇಶ್ ಎಣ್ಣೆ ಮಜಲು ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸದಸ್ಯರುಗಳು ಹಾಜರಿದ್ದರು.