ಸುಬ್ರಮಣ್ಯ: ಹೌದು ಕುಕ್ಕೆ ಸುಬ್ರಮಣ್ಯದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಫ್ರೋಜನ್ ಬೋಟ್ ಎಂಬ ಬರ್ಗರ್ ಕೆಫೆಯನ್ನು ನಿತಿನ್ ಕುಕ್ಕೆ ಅವರು ಅವರ ತಾಯಿಯಾದ ಸುಶೀಲಾ ಅವರ ಮಾರ್ಗದರ್ಶನದಲ್ಲಿ ಕುಕ್ಕೆ ಸುಬ್ರಮಣ್ಯದಲ್ಲಿ ಪ್ರಾರಂಭ ಮಾಡಿದ್ದಾರೆ.

ಈ ಫ್ರೋಜನ್ ಬೋಟ್ ಕೆಫೆಯ ಉದ್ಘಾಟನೆಯನ್ನು ಅಕ್ಟೋಬರ್ 17ರಂದು ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಧಿಕಾರಿ ಸುದರ್ಶನ್ ಜೊಯೆಸ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ತದನಂತರ ಯಜ್ಞೇಶ್ ಆಚಾರ್ ಅವರು ಕೆಫೆಯ ಮೆನು ಕಾರ್ಡನ್ನು ಬಿಡುಗಡೆ ಮಾಡಿದರು..

ಮುಖ್ಯ ಅತಿಥಿಗಳಾಗಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು ,ರಾಘವೇಂದ್ರ ಆಚಾರ್, ನಿತಿನ್ ಭಟ್, ಹೋಟೆಲ್ ವಿಷ್ಣು ವೈಭವದ ಮಾಲೀಕರಾದ ಅಶೋಕ್ ಶೆಟ್ಟಿ ಹಾಗೂ ಇನ್ನಿತರ ಸುಬ್ರಹ್ಮಣ್ಯದ ಗಣ್ಯರು ಕೆಫೆಯ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು.

ಫ್ರೋಜನ್ ಬೋಟ್ ಕೆಫೆ ಮಾಲಕರಾದ ನಿತಿನ್ ಕುಕ್ಕೆ, ತಾಯಿ ಸುಶೀಲ ಅತಿಥಿಗಳನ್ನು ಸ್ವಾಗತಿಸಿದರು.