ಡಾ. ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕುಮಾರಧಾರ ಸ್ವಚ್ಛತಾ ಸೇವೆ.

ಸುಬ್ರಹ್ಮಣ್ಯ(ಅಂ.08): ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್, ಜೇಸಿಐ ಕುಕ್ಕೆಶ್ರೀ, ಹಾಗೂ ನಾಗರಿಕರ ಸಹಕಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.

ಸುಬ್ರಹ್ಮಣ್ಯದ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ನಿಡ್ವಾಳ ಮಹಾವಿಷ್ಣು ದೇವಸ್ಥಾನ ನವೀಕರಣ ನೆಲೆಯಲ್ಲಿ ಇಂದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಟ್ರಸ್ಟ್ ನ ಸಂಚಾಲಕ ಡಾ.ರವಿಕಕ್ಕೆ ಪದವು ತಿಳಿಸಿದ್ದಾರೆ.

ಭಾನುವಾರ ಭಕ್ತರು ಅಪಾರ ಪ್ರಮಾಣದಲ್ಲಿ ಕುಕ್ಕೆಗೆ ಆಗಮಿಸಿದ್ದರು. ಪರಿಸರವನ್ನು ಸ್ವಚ್ಛವಾಗಿಡುವ ಮೂಲಕ ಕ್ಷೇತ್ರವನ್ನು ನಿರ್ಮಲವಾಗಿರಿಸಬೇಕು ಎನ್ನುವ ಅರಿವನ್ನು ಸಾರ್ವಜನಿಕರಿಗೆ ಮೂಡಿಸಲಾಯಿತು.

ಟ್ರಸ್ಟ್ ನ ಅಧ್ಯಕ್ಷ ಡಾ.ರವಿಕಕ್ಕೆ ಪದವು,ಜೆ.ಸಿ.ಐ ಕುಕ್ಕೆಶ್ರೀ ಅಧ್ಯಕ್ಷರು ಯೋಗನಾಥ್, ಟ್ರಸ್ಟ್ ನ ಸದಸ್ಯರಾದ ಮಣಿಕಂಠ,ಪುಷ್ಪವತಿ ಹಾಗೂ ಮತ್ತಿತರ ನೇತೃತ್ವದಲ್ಲಿ ಕುಮಾರಧಾರ ಪರಿಸರದಲ್ಲಿ ಬಿಸಾಕಿದ್ದ ತ್ಯಾಜ್ಯ,ಕಸಗಳನ್ನು ಯುವಕರು ಹೆಕ್ಕಿ ವಿಲೆವಾರಿಗೊಳಿಸಿದರು.