ಸಾರ್ವಜನಿಕ ಶ್ರೀ ಗಣೇಶೋತ್ಸವದ ಅದೃಷ್ಟ ಚೀಟಿಯಲ್ಲಿ ಪ್ರಥಮ ಬಹುಮಾನ ಪಡೆದ ನಾಗೇಶ್ ಎ. ವಿ. ಅವರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಪ್ರಮುಖರಾದ ಕೆ.ಯಜ್ಞೇಶ್ ಆಚಾರ್, ಎ. ವೆಂಕಟ್ರಾಜ್, ಹರೀಶ್ ಇಂಜಾಡಿ, ಚಿದಾನಂದ ಕಂದಡ್ಕ, ಶೇಖರ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ; ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ವತಿಯಿಂದ ಸುಬ್ರಹ್ಮಣ್ಯದಲ್ಲಿ ಆಯೋಜಿಸಲಾಗಿದ್ದ 53ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅದೃಷ್ಟ ಚೀಟಿ ಬಹುಮಾನವನ್ನು ಭಾನುವಾರ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿರಿಯ ನೌಕರ ನಾಗೇಶ್ ಎ.ವಿ. ಅವರಿಗೆ ಸಮಿತಿ ಅಧ್ಯಕ್ಷ ದಿನೇಶ್ ಸಂಪ್ಯಾಡಿ ಬಹುಮಾನ ಹಸ್ತಾಂತರಿಸಿದರು. ದ್ವಿತೀಯ ಬಹುಮಾನ ಪಡೆದ ಮೊಕ್ಷಿತಾ ದೇವರಗದ್ದೆ, ತೃತೀಯ ಬಹುಮಾನ ಗಳಿಸಿದ ಜನಾರ್ಧನ ಕಲ್ಲಜಡ್ಕ, ಹಾಗೂ ಆಕರ್ಷಕ ಬಹುಮಾನ ಪಡೆದ ಸನತ್ ಕಿರಿಭಾಗ, ಐತಪ್ಪ ನಾಯ್ಕ ಅವರಿಗೆ ಬಹುಮಾನ ಹಸ್ತಾಂತರಿಸಲಾಯಿತು. ಸಮಿತಿ ಸಂಚಾಲಕರಾದ ಕೆ. ಕೆ.ಯಜ್ಞೇಶ್ ಆಚಾರ್, ಎ. ವೆಂಕಟರಾಜ್, ಗ್ರಾ.ಪಂ.ಸದಸ್ಯ ಹರೀಶ್ ಎಸ್.ಇಂಜಾಡಿ , ಪೂರ್ವಧ್ಯಕ್ಷ ಚಿದಾನಂದ ಕಂದಡ್ಕ, ಉಪಾಧ್ಯಕ್ಷ ಶೇಖರ್ ಸುಬ್ರಹ್ಮಣ್ಯ, ಅದೃಷ್ಟ ಚೀಟಿ ಸಂಚಾಲಕರಾದ ಲೋಕೇಶ್ ಎನ್.ಎಸ್., ದೀಪಕ್ ನಂಬಿಯಾರ್, ಕುಕ್ಕೆ ದೇವಳದ ವಾಸುದೇವ ಕಾಶಿಕಟ್ಟೆ ಉಪಸ್ಥಿತರಿದ್ದರು.