
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ವಿಕಲಚೇತನ, ಯುವ ಪತ್ರಕರ್ತ, ಹವ್ಯಾಸಿ ಬರಹಗಾರ, ಉಲ್ಲಾಸ ಕಜೋಡಿ ಅವರಿಗೆ ಸೆಂ.22 ರಂದು ಸಹಾಯಧನವನ್ನು ಅವರ ನಿವಾಸದಲ್ಲಿ ನೀಡಿ ಗೌರವಿಸಲಾಯಿತು. ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ಮನೆಗೆ ತೆರಳಿದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸದಸ್ಯರು ಇಂದು ಅವರ ಮನೆಯಲ್ಲಿ ಉಲ್ಲಾಸ ಕಜ್ಜೋಡಿ ಅವರನ್ನು ಭೇಟಿಯಾಗಿ ಅವರನ್ನು ಟ್ರಸ್ಟ್ ವತಿಯಿಂದ ಗೌರವಿಸಿ ಸಹಾಯಧನವನ್ನು ನೀಡಿದರು. ಅಸಕ್ತರಾಗಿದ್ದರು ಸುಮ್ಮಗೆ ಕುಳಿತುಕೊಳ್ಳದೆ ತನ್ನಲ್ಲಿನ ಬುದ್ದಿಮತ್ತತೆ ಬಳಸಿಕೊಂಡು ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರಿಗೆ ಸರಕಾರವು ಆರ್ಥಿಕ ನೆರವಿನ ಜೊತೆಗೆ ವಿಶೇಷ ಕೋಟಾದಡಿ ಉದ್ಯೋಗ ಕಲ್ಪಿಸುವ ಕಡೆ ಗಮನ ಹರಿಸುವಂತೆ ಟ್ರಸ್ಟ್ ಸದಸ್ಯರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಡಾl ರವಿಕಕ್ಕೆ ಪದವು ,ಟ್ರಸ್ಟಿನ ನಿರ್ದೇಶಕರುಗಳಾದ ರವೀಂದ್ರ ಕುಮಾರ ರುದ್ರಪಾದ, ಮೋಹನ್ದಾಸ್ ರೈ, ಮಣಿಕಂಠ, ಸಮಾಜ ಸೇವಕಿ ಪುಷ್ಪ, ಸೀನಿಯರ್ ಚೇಂಬರ್ ನ ಅಧ್ಯಕ್ಷ ವಿಶ್ವನಾಥ ನಡುತೋಟ ,ಹಾಗೂ ಉಲ್ಲಾಸ ಕಜೋಡಿಯವರ ತಂದೆ ಪ್ರಭಾಕರ ಹಾಗೂ ತಾಯಿ ಪ್ರಭಾವತಿ ಉಪಸ್ಥಿತರಿದ್ದರು.

