
ಸುಬ್ರಹ್ಮಣ್ಯ; (ಸೆಂ.20)ನೊಂದ- ಬೆಂದ ಜೀವಗಳ ಬಾಳಲ್ಲಿ ರವಿ ಕಕ್ಕೆಪದವುರವರಿಂದ ಆನಂದ; ಸೀತಾರಾಮ ಗೌಡ ಹೊಸೋಳಿಕೆ ಹೇಳಿಕೆ
ಸವಾಲು ಎದುರಿಸಿದ ದಿಟ್ಟ ಪ್ರತಿಭೆ ಭೀಮಗುಳಿ; ಸೀತಾರಾಮ ಗೌಡ
ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಸೇವಾ ಚಟುವಟಿಕೆಗಳಿಗೆ ಸ್ಪೂರ್ತಿ ಪ್ರೇರಣೆ ನೀಡುವವರಾಗಿದ್ದರು; ರವಿ ಕಕ್ಕೆಪದವು
ಸುಬ್ರಹ್ಮಣ್ಯ; ನೊಂದ ಜೀವಕ್ಕೆ ಬೆಂದ ಬಾಳಿಗೆ ಆನಂದದ ಕಾರುಣ್ಯವನ್ನು ಸಮಾಜ ಸೇವಕ ರವಿ ಕಕ್ಕೆಪದವು ಕರುಣಿಸುತ್ತಿದ್ದಾರೆ. ಸಮಾಜ ಸೇವೆಯಲ್ಲೆ ದೇವರನ್ನು ಕಾಣುವ ರವಿ ಕಕ್ಕೆಪದವು ಅಸಹಾಯಕರ ಪಾಲಿನ ಆಪ್ತ ರಕ್ಷಕ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ , ಬಿಜೆಪಿ ಮುಖಂಡ, ಉದ್ಯಮಿ ಸೀತಾರಾಮ ಪೊಸವಳಿಕೆ ಹೇಳಿದರು.
ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ (ರಿ) ವತಿಯಿಂದ ಸುಬ್ರಹ್ಮಣ್ಯದ ಟ್ರಸ್ಟ್ ಕಚೇರಿಯಲ್ಲಿ ಉದಯವಾಣಿಯ ಹಿರಿಯ ವರದಿಗಾರ ಬಾಲಕೃಷ್ಣ ಭೀಮಗುಳಿ ಅವರನ್ನು ಸನ್ಮಾನಿಸಿ ಅಭಿನಂದಿಸಿ ಅವರು ಮಾತನಾಡಿದರು.
ಸೇವೆ ಪದದ ಅರ್ಥ ಸರಿಯಾಗಿ ಅರ್ಥೈಸಿಕೊಂಡು ಅದನ್ನು ಸಾರ್ಥಕ ರೂಪದಲ್ಲಿ ತಂದವರು ರವಿ ಕಕ್ಕೆಪದವು. ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿರುವ ಸ್ವಾರ್ಥ ವನ್ನು ಬಿಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಅವರು ಹಲವು ಅಸಹಾಯಕರ ಪಾಲಿನ ನಿಜ ದೇವರೆ ಆಗಿದ್ದಾರೆ. ಕೆಲಸದ ಆಳು ಕೂಡ ರವಿ ಕಕ್ಕೆಪದವು ಅವರ ಸೇವೆಯನ್ನು ಕೊಂಡಾಡುವುದನ್ನು ಕಂಡಾಗ ಮನಸ್ಸು ತುಂಬಿ ಬರುತ್ತದೆ ಎಂದರು. ಈ ಹಿಂದೆ ಮತ್ತು ಇವಾಗಲೂ
ತನ್ನ ಸಮಾಜ ಸೇವೆಗೆ ಪ್ರೇರಣೆ, ಸ್ಪೂರ್ತಿ ನೀಡಿದ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರನ್ನು ನೆನಪಿಸಿಕೊಂಡು ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಕಕ್ಕೆಪದವು ಅವರ ಕೃತಜ್ಞತಾ ಗುಣ ಶ್ಲಾಘನೀಯ ಎಂದರು.
ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಗ್ರಾಮೀಣ ಪತ್ರಕರ್ತನಾಗಿ ಹಲವಾರು ಸವಾಲು ಎದುರಿಸಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಹಲವು ಮೇರು ಪತ್ರಕರ್ತರ ಪೈಕಿ ಗುರುತಿಸಬಹುದಾದ ಸಾಧಕ ಪ್ರತಿಭೆ ಇವರು ಎನ್ನುವುದು ನಮಗೆಲ್ಲ ಹೆಮ್ಮೆ ತರುತ್ತಿದೆ.. ಇಂತಹ ಯುವ ಪತ್ರಕರ್ತರನ್ನು ಗೌರವಿಸುವುದಕ್ಕೆ ಸಂತಸವಾಗುತ್ತಿದೆ ಎಂದರು.
ಸಮಾಜ ಸೇವಕ ರವಿ ಕಕ್ಕೆ ಪದವು ಮಾತನಾಡಿ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ನನ್ನ ಬದುಕಿನಲ್ಲಿ ಶಾಶ್ವತ ನೆಲೆಯೂರಿದ ವ್ಯಕ್ತಿ. ನನ್ನ ಸೇವೆಗೆ ಸ್ಪೂರ್ತಿ , ಪ್ರೇರಣೆ ನೀಡಿದವರು. ಅವರು ನನ್ನ ಸೇವಾ ಚಟುವಟಿಕೆಗೆ ನೀಡಿದ ಪ್ರೋತ್ಸಾಹ, ಬೆಂಬಲ ಎಂದಿಗೂ ಮರೆಯಲಸಾಧ್ಯ. ಅವರನ್ನು ಸನ್ಮಾನಿಸಿ, ಗೌರವಿಸಬೇಕೆನ್ನುವ ನನ್ನ ಬಹುದಿನದ ಹಂಬಲಕ್ಕೆ ಇಂದು ಕಾಲ ಕೂಡಿ ಬಂದಿದ್ದು ಅತ್ಯಂತ ಸಂತಸದಿಂದ ಅವರನ್ನು ಗುರುತಿಸಿ ಅಭಿನಂದಿಸುತ್ತಿರುವುದಾಗಿ ಅವರು ಹೇಳಿದರು. ಈ ಸಂದರ್ಭ ರವಿ ಕಕ್ಕೆಪದವು ಸೇವಾ ಟ್ರಸ್ಟ್ ನ ಕೋಶಾಧಿಕಾರಿ ಮಣಿಕಂಠ,
ಚಾಲೆಂಜರ್ ಪೌಂಡೇಶನ್
ಬಬಿತ ಶೆಟ್ಟಿ, ಮಹೇಶ್ ಕೂರ್ಗ್ ಹರಿಪ್ರಸಾದ್, ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.
