
ಕುಕ್ಕೆ ಸುಬ್ರಹ್ಮಣ್ಯ ಫೆ21: ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್, ಆದಿ ಧೂಮಾವತಿ ಕ್ಷೇತ್ರ, ಸಾಯನ ಬೈದ್ಯರೆ ಗುರುಪೀಠ ದೇಯಿಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಬಡಗನ್ನೂರು,(ಗೆಜ್ಜೆಗಿರಿ) ಪುತ್ತೂರು ಇದರ ವಾರ್ಷಿಕ ಜಾತ್ರೋತ್ಸವವು ದಿನಾಂಕ 25.02.2024ನೇ ಶನಿವಾರದಿಂದ 29.02.2024ನೇ ಗುರುವಾರದವರೆಗೆ ನಡೆಯಲಿರುವುದು. ಜಾತ್ರೋತ್ಸವದ ಪ್ರಯುಕ್ತ ಕಾರ್ಯಕ್ರಮಕ್ಕೆ ವರ್ಷಂಪ್ರತಿ ನೀಡುವಂತಹ ಹೊರೆ ಕಾಣಿಕೆಗೆ ಪ್ರತಿ ಮನೆಯಿಂದ ಅಕ್ಕಿ, ತೆಂಗಿನಕಾಯಿ, ತರಕಾರಿ, ಬಾಳೆಎಲೆ, ಬಾಳೆಗೊನೆ, ಸಿಯಾಳ, ದನದ ತುಪ್ಪ, ಎಣ್ಣೆ, ಹಿಂಗಾರ, ಹೂ-ತುಳಸಿ ಇತ್ಯಾದಿ ವಸ್ತುಗಳನ್ನು ನೀಡಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಪ್ರತಿ ತಾಲೂಕಿನಿಂದ ಹೊರೆ ಕಾಣಿಕೆಯನ್ನು ದಿನಾಂಕ 25.2.2024ರ ಸಂಜೆ 6:00 ಗಂಟೆಯ ಒಳಗೆ ಶ್ರೀ ಕ್ಷೇತ್ರಕ್ಕೆ ತಲುಪಿಸಬೇಕಾಗಿ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು ರವರು ಈ ಮೂಲಕ ವಿನಂತಿಸಿಕೊಳ್ಳುತ್ತಾರೆ.