
ಕುಕ್ಕೆ ಸುಬ್ರಮಣ್ಯ ಫೆ11: ಕುಕ್ಕೆ ಸುಬ್ರಮಣ್ಯ ನಾಗಾರಾಧನೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಇರೋದು ಸಾಮಾನ್ಯ. ಅಂತೆಯೇ ಇದೀಗ ನಿರಂತರವಾಗಿ ಕ್ಷೇತ್ರದ ಮುಖ್ಯ ರಸ್ತೆಗಳ ಇಕ್ಕಲೆಗಳಲ್ಲಿ ಸಾಕಷ್ಟು ತ್ಯಾಜ್ಯ ವಸ್ತುಗಳು ಹಾಗೂ ಕಚ್ಚ ವಸ್ತುಗಳು ಬಿದ್ದಿರುತ್ತವೆ. ಇದನ್ನು ಮನಗಂಡ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಕುಮಾರಧಾರ ಸ್ಥಾನಗಟ್ಟದ ಸುತ್ತಮುತ್ತಲಿನ ಪರಿಸರದಲ್ಲಿರುವಂತಹ ಕಸಕಡ್ಡಿ, ಪ್ಲಾಸ್ಟಿಕ್ ಬಾಟಲಿಗಳು, ಆಹಾರದ ಪಟ್ಟಣಗಳು ಇತರ ಕಚ್ಚ ವಸ್ತುಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯನ್ನು ಕೈಗೊಂಡಿರುತ್ತಾರೆ.
ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಪ್ರಯಾಣಿಕರಿಗೆ ಎಷ್ಟೇ ಮಾಹಿತಿಯನ್ನು ನೀಡಿದರು ಪ್ರಯೋಜನವಾಗುತ್ತಿಲ್ಲ.ಎಲ್ಲೆಡೆ ಕಸ ಹಾಕುತ್ತಿರುವುದು ಕಂಡು ಬರುತ್ತಿದೆ. ಇದನ್ನು ಮನಗಂಡ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು ಅವರ ಮಾರ್ಗದರ್ಶನದಲ್ಲಿ ಇಂದಿನ ಸ್ವಚ್ಚತಾ ಕಾರ್ಯಕ್ರಮದ ನಾಯಕ ಶರಣಪ್ಪ ರವರ ನೇತ್ರತ್ವದಲ್ಲಿ ಸ್ವಚ್ಛತೆಯನ್ನು ಕೈಗೊಂಡಿರುವುದು ಶ್ಲಾಘನೀಯ. ಅಲ್ಲದೆ ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ.