
ಕುಕ್ಕೆ ಸುಬ್ರಮಣ್ಯ: ಸುಬ್ರಮಣ್ಯ ಫೆ.7 ನಾಗಾರಾಧನೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ಥಳದ ಆರಾದ್ಯ ಮೂರ್ತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹೆಸರಿನಲ್ಲಿ ಒಂದಾಗಿ ಕುಕ್ಕೆ ಶ್ರೀ ಎಂಬ ಹೆಸರಿನಲ್ಲಿ 12 ವರ್ಷಗಳ ಹಿಂದೆ ಕುಕ್ಕೆಶ್ರೀ ಆಟೋ ಚಾಲಕ ಮಾಲಕರ ಸಂಘವು ನೋಂದಣಿಗೊಂಡಿತ್ತು. ಸಂಘವು ಕಳೆದ 12 ವರ್ಷಗಳಿಂದ ನಿರಂತರವಾಗಿ ತಮ್ಮ ದುಡಿಮೆಯ ಉಳಿತಾಯದಲ್ಲಿ ಕಿಂಚಿತ್ತು ಸಮಾಜಕ್ಕಾಗಿ ಎಂಬ ಧೇಯ ವಾಕ್ಯದೊಂದಿಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಿಕೆಗಳಿಗೆ ಗಮನ ಹರಿಸುತ್ತಾ, ಸಮಾಜಮುಖಿ, ಸಹಕಾರ, ಶ್ರಮ ವಿನಿಯೋಗ, ಆರೋಗ್ಯ ಸೇವೆಗಳನ್ನು ನಡೆಸುತ್ತಾ ಬಂದಿದೆ. ಗ್ರಾಮೀಣ ಭಾಗದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕ ಸಂಘವು ಪ್ರಸ್ತುತ ಸಮಾಜದಲ್ಲಿ ತನ್ನ ಉತ್ತಮ ನಡವಳಿಕೆಯ ಮೂಲಕ ತನ್ನದೇ ಆದ ಉತ್ತಮ ಘನತೆ ಗೌರವವನ್ನು ಬೆಳೆಸಿಕೊಂಡು ಬಂದಿದೆ.ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘವು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನೊಂದಿಗೆ ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿದ್ದೆ. ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ 13 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಶುಭಾಶಯವನ್ನು ಕೋರಲಾಯಿತು.