
ಸುಬ್ರಹ್ಮಣ್ಯ ಜ 2. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆಮಾವುತ ಶ್ರೀನಿವಾಸ ಗೌಡರಿಗೆ ಡಾ. ರವಿ ಕಕ್ಕೆ ಪದ ವು ಸಮಾಜ ಸೇವಾ ಟ್ರಸ್ಟ್ ಹಾಗೂ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ಜಂಟಿಯಾಗಿ ಸನ್ಮಾನವನ್ನು ಏರ್ಪಡಿಸಲಾಗಿತ್ತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ 15 ವರ್ಷಗಳಿಂದ ಯಶಸ್ವಿನಿ ಆನೆಯ ಪ್ರೀತಿಯ ಮಾವುತನಾಗಿ,ಪ್ರಾಮಾಣಿಕನಾಗಿ, ಭಕ್ತರ ಪ್ರೀತಿಯ ಆಧಾರಗಳಿಗೆ ಪಾತ್ರರಾಗಿ ಸೇವೆ ಸಲ್ಲಿಸಿ ದೇವಾಳದಿಂದ ನಿವೃತ್ತಿರಾದ ಶ್ರೀನಿವಾಸರವರನ್ನು ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆ ಪದವು ಹಾಗೂ ಸುಬ್ರಹ್ಮಣ್ಯದ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಉಮೇಶ್. ಕೆ ನವರು ಶಾಲು ಹೊದಿಸಿ, ಹಾರ ಹಾಕಿ, ಸ್ಮರಣೆಕೆ ಹಾಗೂ ಫಲ ಪುಷ್ಪ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಲೋಕೇಶ್ ಬಿ ಏನ್ ಸುಬ್ರಹ್ಮಣ್ಯ ದ ಪತ್ರಕರ್ತ ಪ್ರಕಾಶ್, ಅಭಿಷೇಕ್ ನಡು ತೋಟ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಪುಷ್ಪ ಕುಮಾರಧಾರ, ಸೂರ್ಯ ಭಟ್, ಕಾರ್ತಿಕ್, ಬೆಳ್ಳಿಯಪ್ಪ, ರಮ್ಯ ಮುಂತಾದವರು ಉಪಸ್ಥಿತರಿದ್ದರು.
