ಸುಬ್ರಹ್ಮಣ್ಯ (ಡಿ.27) : ಸಯ್ಯದ್ ಜಿ ಎಂಬ ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಸುಬ್ರಹ್ಮಣ್ಯದಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಆಟೋ ಚಾಲಕರು ಡಾ. ರವಿ ಕಕ್ಕೆಪದವು ಅವರ ಗಮನಕ್ಕೆ ತಂದು ಅವರು ವಿಚಾರಿಸಿದಾಗ ಶಿವಮೊಗ್ಗದ ಅರುಣ್ ಎಂಬ ವ್ಯಕ್ತಿಯು ಕೆಲಸಕ್ಕೆಂದು ಸುಬ್ರಹ್ಮಣ್ಯಕ್ಕೆ ಕರೆ ತಂದು ಕುಮಾರಧಾರ ನದಿಯ ಪಕ್ಕದಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಅವರಿಂದ ದೊರಕಿದೆ. ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರವಿ ಕಕ್ಕೆಪದವು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿ ಊಟದ ವ್ಯವಸ್ಥೆ ಮಾಡಿದರು. ಹಾಗೂ ಶಿವಮೊಗ್ಗಕ್ಕೆ ಹೋಗಲು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ವತಿಯಿಂದ ಬಸ್ ನ ವೆಚ್ಚವನ್ನು ನೀಡಿ ಸಹಕರಿಸಿದರು.