
ಸುಬ್ರಹ್ಮಣ್ಯ(ಡಿ.24) : ಸುಬ್ರಹ್ಮಣ್ಯಕ್ಕೆ 24 * 7 ಆಸ್ಪತ್ರೆ ಸೇವೆಗಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ. ಪ್ರಪಂಚದಾದ್ಯಂತ ದಿನನಿತ್ಯ ಸಾವಿರಾರು ಭಕ್ತಾದಿಗಳು ಬರತಕ್ಕಂತ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತಾದಿಗಳ ಅನುಕೂಲಕ್ಕಾಗಿ ಸುಬ್ರಹ್ಮಣ್ಯಕ್ಕೆ ಸುಸಜ್ಜಿತವಾದ 24 * 7 ಆಸ್ಪತ್ರೆ ಸೇವೆಗಾಗಿ ವಿಧಾನಸಭಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆ ಪದವು ಅವರು ಮನವಿ ಸಲ್ಲಿಸಿರುವರು. ರವಿವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇಲ್ಲಿಯ ಈಗಿನ ಆಸ್ಪತ್ರೆಯ ಪರಿಸ್ಥಿತಿಯನ್ನು ವಿವರವಾಗಿ ವಿವರಿಸಿ ಶ್ರೀ ಕ್ಷೇತ್ರಕ್ಕೆ ಬರತಕ್ಕ ಭಕ್ತಾದಿಗಳು ಅಗತ್ಯ ಆರೋಗ್ಯ ಸೇವೆಗಾಗಿ ಪಡುವಂತಹ ಕಷ್ಟ ಪರಿಸ್ಥಿತಿಯನ್ನ ವಿವರವಾಗಿ ತಿಳಿಸಿರುವರು ಅಲ್ಲದೆ ಕುಕ್ಕೆಗೆ ಅಗತ್ಯವಾಗಿ 24*7 ಸೇವೆಯನ್ನು ಸಲ್ಲಿಸ್ತಕ್ಕ ಸುಸಜ್ಜಿತವಾದ ಆಸ್ಪತ್ರೆಯ ಅಗತ್ಯತೆಯನ್ನು ವಿವರಿಸಿದರು. ಮನವಿಯನ್ನ ಸ್ವೀಕರಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಕೂಡಲೇ ಸ್ಪಂದಿಸಿ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಮಾದವ ದೇವರಗದ್ದೆ ಉಪಸ್ಥಿತರಿದ್ದರು.