ಸುಬ್ರಹ್ಮಣ್ಯ (ಡಿ.23): 15ನೇ ವರ್ಷದ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಸುಬ್ರಮಣ್ಯದ ಕಾಶಿಕಟ್ಟೆ ಶ್ರೀ ಗಣಪತಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪದ್ಮನಾಭ ಸ್ವಾಮಿ, ಉಮೇಶ್ ಕೆ.ಎನ್, ಕೋಶಾಧಿಕಾರಿಯದ ಜಯಪ್ರಕಾಶ್ ಆರ್, ಸಂಚಾಲಕರದ ದೀಪಕ್ ನಂಬಿಯಾರ್, ಶ್ರೀ ದಾಮೋದರ ಗುರುಸ್ವಾಮಿ, ಶ್ರೀ ರವಿಕಕ್ಕೆ ಪದವು, ದಿನೇಶ್ ಹಾಗೂ ಮತ್ತಿತರು ಪಾಲ್ಗೊಂಡಿದ್ದರು. ದಿನಾಂಕ 27.12.2023ನೇ ಬುಧವಾರದಂದು ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ ಉಮೇಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವವು ಜರುಗಲಿರುವುದು.
ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಅಧ್ಯಕ್ಷರಾಗಿ ಪದ್ಮನಾಭಸ್ವಾಮಿ, ಉಮೇಶ್ ಕೆ.ಎನ್, ಕಾರ್ಯದರ್ಶಿಯಾಗಿ ರತ್ನಾಕರ ಸುಬ್ರಮಣ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಕೈಕಂಬ, ಕಾರ್ಯದರ್ಶಿಯಾಗಿ ಚರಣ್ ಕಾನಡ್ಕ ,ಪ್ರಸನ್ನ ನೂಚಿಲ,ಜತೆ ಕಾರ್ಯದರ್ಶಿಯಾಗಿ ಪ್ರೀತೇಶ್ ಎಡೋಳಿ , ಕೋಶಾಧಿಕಾರಿಯದ ಜಯಪ್ರಕಾಶ್.ಆರ್, ಸಹಕೋಶಾಧಿಕಾರಿಯದ ಸುಹಾಸ್ ಎಸ್ ಇವರನ್ನು ಆಯೋಜಿಸಲಾಗಿದೆ.

ಬೆಳಗ್ಗೆ ಗಂಟೆ 6.00ಕ್ಕೆ ಗಣಹೋಮ, ಮಧ್ಯಾಹ್ನ ಗಂಟೆ 1.00ಕ್ಕೆ ಶ್ರೀ ವನದುರ್ಗದೇವಿ ದೇವಸ್ಥಾನದ ಸಭಾಂಗಣದಲ್ಲಿ ಸ್ವಾಮಿಗಳಿಗೆ ಅನ್ನದಾನ, ಸಂಜೆ ಗಂಟೆ 6.00ಕ್ಕೆ ದೀಪ ಬೆಳಗಿಸುವುದು ನಂತರ ಶ್ರೀದುರ್ಗ ಭಜನಾ ಮಂಡಳಿ ಮರಕತ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6.35ಕ್ಕೆ ಶ್ರೀಅಯ್ಯಪ್ಪಸ್ವಾಮಿ ದೀಪೋತ್ಸವದ ಮೆರವಣಿಗೆ, ರಾತ್ರಿ ಗಂಟೆ 9ಕ್ಕೆ ಶ್ರೀ ಅಯ್ಯಪ್ಪ ದೀಪೋತ್ಸವ ಮತ್ತು ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿರುವುದು. ಮೆರವಣಿಗೆ ವಿಶೇಷ ಆಕರ್ಷಣೆಯಾಗಿ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಚಾರ್ವಾಕ ಇವರಿಂದ ಸಿಂಗಾರಿ ಮೇಳ, ಶ್ರೀ ಗಿರೀಶ್ ಆಚಾರ್ಯ ಪೈಲಾಜೆ ಇವರ ಸಂಯೋಜನೆಯಲ್ಲಿ ಊರ ಮತ್ತು ಪರವೂರ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ ಹಾಗೂ ಸ.ಮಾ.ಹಿ.ಪ್ರಾ. ಶಾಲೆ ಸುಬ್ರಮಣ್ಯ ಇಲ್ಲಿನ ವಿದ್ಯಾರ್ಥಿನಿಯರಿಂದ ದೀಪದ ಮೆರವಣಿಗೆ ನಡೆಯಲಿರುವುದು.