
ಸುಬ್ರಹ್ಮಣ್ಯ: ಡಿಸೆಂಬರ್ 19/12/2023ನೇ ಮಂಗಳವಾರ ರಾತ್ರಿ ವೇಳೆ ಪ್ರವಾಸದ ನಿಮಿತ್ತವಾಗಿ ಹಾವೇರಿಯಿಂದ ಸುಬ್ರಹ್ಮಣ್ಯಕ್ಕೆ ಶಾಲಾ ಬಸ್ ತಡವಾಗಿ ಬಂದ ಕಾರಣ ದೇವಸ್ಥಾನದ ಭೋಜನ ವ್ಯವಸ್ಥೆ ಹಾಗೂ ಹೋಟೆಲ್ ಗಳು ಮುಚ್ಚಲಾಗಿತ್ತು. ಅ ಸಂದರ್ಭದಲ್ಲಿ ಆಕಸ್ಮಿಕವಾಗಿ ಭೇಟಿ ನೀಡಿದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರು ಡಾ. ರವಿ ಕಕ್ಕೇಪದವು ಹಸಿವಿನಿಂದ ಕಂಗಾಲಾದ ಮಕ್ಕಳನ್ನು ನೋಡಿ ಅವರ ಜೊತೆ ಮಾತಾಡಿ ಅವರನ್ನು ಊಟಕ್ಕೆ ತನ್ನ ಮನೆಗೆ ಕರೆದುಕೊಂಡು ಹೋಗಿ ಸುಮಾರು 65 ಮಕ್ಕಳು ಮತ್ತು ಶಿಕ್ಷಕರಿಗೆ ಅವರ ಪತ್ನಿಯಾದ ಗೀತಾರವರು ಊಟದ ವ್ಯವಸ್ಥೆ ಮಾಡಿದರು ಹಾಗೂ ರವಿ ಕಕ್ಕೆಪದವು ಅವರ ಮನೆಯಲ್ಲಿಯೇ ಮಲಗಲು ವ್ಯವಸ್ಥೆಯನ್ನು ಮಾಡಿದರು.

ಶಾಲಾ ಬಸ್ ಕೆಟ್ಟು ಹೋದ ಕಾರಣ ಇವರೊಂದಿಗೆ ಟ್ರಸ್ಟ್ ನ ಕೋಶಾಧಿಕಾರಿಯಾದ ಮಣಿಕಂಠ, ಹಾಗೂ ಸದಸ್ಯರಾದ ವಸಂತ್ ಮತ್ತು ಕಾರ್ತಿಕ್ ರವರು ಸುಮಾರು 12.30 ಗಂಟೆಗೆ ಮಕ್ಕಳನ್ನು ರವಿ ಕಕ್ಕೆಪದವವು ಅವರ ಮನೆಗೆ ತಲುಪಿಸುವಲ್ಲಿ ಸಹಕರಿಸಿದರು.