
ಕುಕ್ಕೆ ಸುಬ್ರಮಣ್ಯ ಮಾ.19: ಕುಕ್ಕೆ ಸುಬ್ರಮಣ್ಯಕ್ಕೆ ಬೆಂಗಳೂರಿನ ಚಂದಾಪುರದಲ್ಲಿ YMRS ಟ್ರಾನ್ಸ್ಪೋರ್ಟ್ ಉದ್ಯಮವನ್ನು ನಡೆಸುತ್ತಿರುವ ರಾಜು ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಸಲ್ಲಿಸಿ ಇಲ್ಲಿನ ಅನ್ನದಾನಕ್ಕಾಗಿ ಸುಮಾರು ಎಂಟು ಕ್ವಿಂಟಾಲು ಊಟದ ಅಕ್ಕಿಯನ್ನು ಸುಬ್ರಹ್ಮಣ್ಯ ದೇವಾಲಯಕ್ಕೆ ಹಸ್ತಾಂತರಿಸಿರುತ್ತಾರೆ. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಅಧಿಕಾರಿ ನಿಂಗಯ್ಯ ಮತ್ತು ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಾಜುರೆ ಮತ್ತು ಸ್ಥಳೀಯ ಮುಖಂಡರಾದ ರವಿಕಕ್ಕೆ ಪದವು ಮತ್ತು ಗೋಪಾಲ್ ಎಣ್ಣೆ ಮಜಲು ಮತ್ತು ದಾನಿಗಳ ಮಿತ್ರರಾದ ಶಿವಪ್ರಸಾದ್ ಹೊದ್ದಟ್ಟಿ ಉಪಸ್ಥಿತರಿದ್ದರು.