
ಕುಕ್ಕೆ ಸುಬ್ರಹ್ಮಣ್ಯ ಫೆ18: ಕುಕ್ಕೆ ಸುಬ್ರಮಣ್ಯ ಸ್ಕಂದ ಶ್ರೀ ಯುವ ಮಲೆಕುಡಿಯರ ಸಂಘ ಸುಬ್ರಮಣ್ಯ ಇದರ ಏಳನೇ ವರ್ಷದ ಕಬಡ್ಡಿ ಪಂದ್ಯಾಟವು ಫೆಬ್ರವರಿ 18ರಂದು ಅದಿತ್ಯವಾರ ಅರಿಗುಡಿ ಗದ್ದೆ ಆದಿ ಸುಬ್ರಹ್ಮಣ್ಯದಲ್ಲಿ ನಡೆಯಿತು. ಇದರ ಉದ್ಘಟಕ ರಾಗಿ ಶ್ರೀ ಯಜ್ಞೇಶ್ ಆಚಾರ್, ಕಲಾವಿದರು, ಸುಬ್ರಹ್ಮಣ್ಯ ಮಾಲಕರು, ಹೋಟೆಲ್ ರಾಘವೇಂದ್ರ ಪ್ರಸಾದ್, ಸುಬ್ರಮಣ್ಯ , ಅಧ್ಯಕ್ಷತೆ ಶ್ರೀ ಕುಶಲಪ್ಪ ಕೋಡಿಕಜೆ, ಮುಖ್ಯ ಅತಿಥಿಗಳು ಡಾ. ರವಿ ಕಕ್ಕೆಪದವು ಅದ್ಯಕ್ಷರು, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ (ರಿ) ಸುಬ್ರಮಣ್ಯ, ಶ್ರೀ ಚಂದ್ರಶೇಖರ್ ಕೋಡಿಕಜೆ ಮಲೆ ಗುರಿಕಾರರು ಸುಬ್ರಮಣ್ಯ ಹಾಗೂ ಶ್ರೀ ಜಾನಪ್ಪ ಅರ್ಗುಡಿ ಸ್ಥಳಾವಕಾಶ ನೀಡಿದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಟಾಣಿ ಮಕ್ಕಳಾದ ಸಾನ್ವಿ ಹಾಗೂ ಶಾನ್ವಿತ ರವರ ಪ್ರಾರ್ಥನೆ ಮೂಲಕ ಸಭೆಯನ್ನು ಉದ್ಘಾಟಿಸಲಾಯಿತು. ಉದ್ಘಟಕರಾದ ಶ್ರೀ ಯಜ್ಞೇಶ್ ಆಚಾರ್ ರವರು ದೀಪ ಬೆಳಗಿಸುವುದರ ಮೂಲಕ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಹಾಗೂ ಡಾ. ರವಿ ಕಕ್ಕೆ ಪದವು ರವರು ದೀಪ ಬೆಳಗಿಸಿ ಮಾತನಾಡಿ ಶುಭಾಶಯ ಕೋರಿ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿದರು.