
ಸುಬ್ರಹ್ಮಣ್ಯ ಡಿ.10: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರೋತ್ಸವ ಡಿಸೆಂಬರ್ 10 ರಂದು ಆರಂಭಗೊಂಡಿತದ್ದು ಜಾತ್ರೋತ್ಸವಕ್ಕೆ ದೂರ ದೂರಗಳಿಂದ ಬರುವ ಭಕ್ತಾದಿಗಳಿಗೆ ಸ್ವಚ್ಛ ಪರಿಸರದಲ್ಲಿ ದೇವರ ದರ್ಶನ ಆಗಬೇಕು ಎನ್ನುವ ಉದ್ದೇಶದಿಂದ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಪ್ರತಿವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವ ಸುಬ್ರಹ್ಮಣ್ಯದ ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನವರು ತನ್ನ ಸ್ವಯಂಸೇವಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿರುತ್ತಾರೆ. ಕುಮಾರಧಾರ ಪರಿಸರ ಸೇತುವೆಯ ಪರಿಸರಗಳು ಮುಖ್ಯರಸ್ತೆ ಪರಿಸರಗಳಲ್ಲಿ ಇರತಕ್ಕಂತಹ ಬಾಟಲುಗಳು ಕಚ್ಚ ವಸ್ತುಗಳನ್ನು ಸ್ವಚ್ಛತೆ ಮಾಡುವುದರೊಂದಿಗೆ ಸೇವಾ ಕಾರ್ಯವನ್ನು ಕೈಗೊಂಡಿರುವರು.