
ಗೋಕಾಕದ ನಾಡಿನ ಸಮಚಾರ ಸೇವಾ ಸಂಘ ಹಾಗೂ ನಾಡಿನ ಸಮಚಾರ ದಿನಪತ್ರಿಕೆ ಇದರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ನಾಮಕರಣದ “ಸುವರ್ಣ ಮಹೋತ್ಸವ”ವರ್ಷ 68ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕೊಡ ಮಾಡುವ ರಾಜ್ಯ ಮಟ್ಟದ ಕರ್ನಾಟಕ ಸಾಧಕ ರತ್ನ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ಇಂದಿನ ಜೆಸಿಐ ಕುಕ್ಕೆಶ್ರೀಯ ಕಾರ್ಯದರ್ಶಿಯಾದ ಡಾ. ರಾಜೇಶ್ವರಿಯವರು ಆಯ್ಕೆಯಾಗಿದ್ದಾರೆ. ನವೆಂಬರ್ 18ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ನಡೆಯುವ “ಕನ್ನಡ ನುಡಿ ಸಂಭ್ರಮ” ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ರಾಜೇಶ್ವರಿ ಅವರು ನಿವೃತ್ತ ಶಿಕ್ಷಕರಾದ ಮೇರ್ಕಜೆ ಮೇದಪ್ಪ ಮಾಸ್ಟರ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಭುವನೇಶ್ವರಿಯವರ ಸುಪುತ್ರಿಯಾಗಿದ್ದು ಸಂಪಾಜೆ ಕಳಗಿ ಡಾ.ಗೌತಮ್ ರವರ ಪತ್ನಿ.